ಮುಪ್ಪಿನ ಮರ ಮತ್ತು ಹಕ್ಕಿಗಳು

ನಿತ್ಯ ಎದ್ದು ಬಾಲ್ಕನಿಯಲ್ಲಿ ಕುಳಿತು ಎದುರಿರುವ ಮರ ಮತ್ತು ಅದರಲ್ಲಿ ಆಶ್ರಯ ಪಡೆದಿದ್ದ ಹಕ್ಕಿಗಳನ್ನು ನೋಡುತ್ತಾ ಕೂರುವುದು ವಾಸುವಿಗೆ ಪ್ರಿಯವಾದ ಕೆಲಸ. ನಿವೃತ್ತ ಜೀವನ, ಮಕ್ಕಳು ದೂರದ ದೇಶದಲ್ಲಿದ್ದಾರೆ. ಹೆಂಡತಿಯ ಕಾಲವಾಗಿದೆ. ಮನೆ ಕೆಲಸಕ್ಕೆ ಬರುವ ಲಕ್ಷ್ಮಿ ತನ್ನ ಮನೆಯ ಕಷ್ಟ-ಸುಖ ಹೇಳುವುದನ್ನು ಕೇಳಿಸಿಕೊಳ್ಳುವುದು ಬಿಟ್ಟರೆ ವಾಸುವಿಗೆ ಹೊತ್ತು ಕಳೆಯಲು ಇದ್ದಿದ್ದ ಸಂಗಾತಿಗಳೆಂದರೆ ಆ ಮರ ಮತ್ತು ಹಕ್ಕಿಗಳು. ಮುಂಜಾವಿನಲ್ಲಿ ವಾಸುವಿಗೆ ಒಂದು ಕಪ್ ಕಾಫಿ ಹೀರುವುದು ಬಹಳ ಇಷ್ಟದ ಕೆಲಸ. ತಾನೇ ಕಾಫಿ ಕಲಸಿಕೊಂಡು ಬಿಸಿ ಬಿಸಿಯಾಗಿರುವಾಗಲೇ ಹೀರಿಕೊಳ್ಳುತ್ತಲೇ ಮರ… Read More »

ಐಪಿಎಸ್, ಐಎಎಸ್ ಜಗಳದಲ್ಲಿ ಬೆತ್ತಲಾಗಿದ್ದು ಏನು?

ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಐಪಿಎಸ್ ರೂಪಾ ಬಗ್ಗೆ ಲೇಖನವೊಂದನ್ನು ಓದಿದ್ದೆ. ಅವರ ಬಾಲ್ಯ, ವೈಯಕ್ತಿಕ ಜೀವನ, ಸಾಧನೆ ಎಲ್ಲವೂ ಅದರಲ್ಲಿತ್ತು. ರಾಷ್ಟ್ರಪತಿ ಪದಕ ವಿಜೇತ ದಕ್ಷ ಅಧಿಕಾರಿ ಎಂಬೆಲ್ಲಾ ವಿವರಗಳು ಅದರಲ್ಲಿತ್ತು. ಅವರನ್ನು ನೋಡುವಾಗ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಇಂತಹ ದಕ್ಷ ಮಹಿಳಾ ಅಧಿಕಾರಿಗಳಿದ್ದಾರಲ್ಲಾ? ಇಂತಹವರು ನಮಗೆ ಆದರ್ಶವಾಗಬೇಕು ಎಂದು ಹೆಮ್ಮೆಯಾಗಿತ್ತು. ಹಿಂದೊಮ್ಮೆ ಶಶಿಕಲಾ ನಟರಾಜನ್ ಜೈಲಿನಲ್ಲಿದ್ದಾಗ ಅಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಯಾವುದೇ ಪ್ರಭಾವಕ್ಕೊಳಗಾಗದೇ, ನಿರ್ಬೀಡೆಯಿಂದ ವರದಿ ಸಲ್ಲಿಸಿದಾಗ ಅವರ ಬಗ್ಗೆ ಇದ್ದ ಹೆಮ್ಮೆ ಇಮ್ಮಡಿಯಾಗಿತ್ತು. ಅದೇ… Read More »

ಕ್ಯಾಚ್ ಪಡೆದು ಮನೆ ಮಾತಾದ ಕ್ವೀನ್ ಆಫ್ ಕ್ರಿಕೆಟ್ ಹರ್ಲಿನ್ ಡಿಯೋಲ್ ಸ್ಪೂರ್ತಿದಾಯಕ ಕತೆ

‘ಎ ವಾಕ್ ಟು ರಿಮೆಂಬರ್’ ಹೀಗಂತ ಕೆಲವು ದಿನಗಳ ಹಿಂದೆ ಈಕೆ ತನ್ನ ಇನ್ ಸ್ಟಾಗ್ರಾಂ ಪುಟದಲ್ಲಿ ಸಾಲೊಂದನ್ನು ಬರೆದುಕೊಂಡಿದ್ದಳು. ಅದಾಗಿ ಕೆಲವೇ ದಿನಕ್ಕೆ ಆಕೆ ಜಗತ್ತೇ ನೆನಪಿನಲ್ಲಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದಾಳೆ. ಆ ಸಾಧಕಿ ಹರ್ಲಿನ್ ಡಿಯೋಲ್. 23 ವರ್ಷದ ಈ ಸುಂದರಿ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟ್ಸ್ ವುಮನ್. ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಈಕೆ ಹಿಡಿದ ಫ್ಲೈಯಿಂಗ್ ಕ್ಯಾಚ್ ಈಗ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿಯೇ ಈಕೆಯ ಸಾಧನೆಯನ್ನು ಕೊಂಡಾಡಿದ್ದಾರೆ. ರಾಜಕೀಯ ನಾಯಕರಿಂದ… Read More »

ಜೊತೆ ಜೊತೆಯಲಿ ಧಾರವಾಹಿ ವೀಕ್ಷಕರಿಗೆ ಮೇಘಾ ಶೆಟ್ಟಿ ಶಾಕ್!!

ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ.. ಹೀಗೊಂದು ಹೆಸರು ಕೇಳಿದರೆ ಧಾರವಾಹಿ ಪ್ರಿಯರು ತಮ್ಮ ಮನೆ ಮಗಳೇನೋ ಎನ್ನುವಷ್ಟು ಪ್ರೀತಿ ತೋರುತ್ತಾರೆ. ಯಾಕೆಂದರೆ ಜೊತೆ ಜೊತೆಯಲಿ ಧಾರವಾಹಿಯಷ್ಟೇ ಅದರ ಪಾತ್ರಧಾರಿಗಳೂ ವೀಕ್ಷಕರಿಗೆ ಅಚ್ಚುಮೆಚ್ಚು.ಮೊದಲ ವಾರದಲ್ಲೇ ಟಿಆರ್ ಪಿ ವಿಚಾರದಲ್ಲಿ ದಾಖಲೆ ಮಾಡಿದ್ದ ಈ ಸೆನ್ಸೇಷನಲ್ ಧಾರವಾಹಿ ವೀಕ್ಷಕರಿಗೆ ಈಗ ಶಾಕಿಂಗ್ ಸುದ್ದಿಯೊಂದು ಕಾದಿದೆ. ಕೆಲವು ತಿಂಗಳ ಹಿಂದೆ ನಾಯಕಿ ಮೇಘಾ ಧಾರವಾಹಿ ಬಿಟ್ಟು ಬಿಗ್ಬಾಸ್ ಮನೆ ಸೇರುತ್ತಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಮೊದಲೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್… Read More »

ಧೋನಿಯ ಯಶಸ್ಸಿಗೆ ಗಂಗೂಲಿಯ ಸೋಲುಗಳೂ ಕಾರಣ

ಜುಲೈ 7 ಎಂದ ತಕ್ಷಣ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಕಿವಿ ನೆಟ್ಟಗಾಗುತ್ತದೆ. ಅರೇ.. ಇಂದು ಕ್ಯಾಪ್ಟನ್ ಕೂಲ್ ಧೋನಿ ಬರ್ತ್ ಡೇ ಎಂದು ನೆನೆಸಿಕೊಳ್ಳುತ್ತಾರೆ. ಧೋನಿ ನಾಯಕರಾಗಿ ಮಿಂಚುವುದಕ್ಕೆ ಗಂಗೂಲಿ ಸೋಲುಗಳು ಹೇಗೆ ಕಾರಣವಾದವು ಎನ್ನುವುದರ ಸಣ್ಣ ವಿಶ್ಲೇಷಣೆ ಇಲ್ಲಿದೆ ಓದಿ.. ಬೇಸಿಗೆಯ ಬಿರು ಬಿಸಿಲಿನಲ್ಲಿ ಮೈ ಎಲ್ಲಾ ಬೆವರಿ ಬೆಂಡಾದಾಗ ಮೋಡ ಕಟ್ಟಿ ಮೆಲ್ಲನೆ ತಂಪಾದ ಗಾಳಿ ಬೀಸಿದರೇ ಮೈ ಮನಕ್ಕೆ ಖುಷಿಯಾಗಿಬಿಡುತ್ತದೆ. ಮುಂದೆ ಮಳೆ ಬರಬಹುದು ಎಂಬ ಆಶಾಭಾವನೆ ಮೂಡುತ್ತದೆ. ಮಳೆ ಬಾರದೇ ಹೋದಾಗ ನಿರಾಸೆಯಾಗುತ್ತದೆ. ಒಂದೊಮ್ಮೆ ಸಣ್ಣ… Read More »

ಪ್ರಿಪೇರ್ ಎಜುಟೆಕ್ App ಬಿಡುಗಡೆ: ಕನ್ನಡ ವಿದ್ಯಾರ್ಥಿಗಳಿಗೆ ಹೊಸ ಆಶಾಕಿರಣ

ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಇತರೆ ಕೋರ್ಸ್‌ಗಳನ್ನು ಕಲಿಯಲು ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಸೇರಿದ ವಿದ್ಯಾರ್ಥಿಗಳಿಗೆ ಟೀಚಿಂಗ್ ಅರ್ಥವಾಗದೆ ಕಷ್ಟಪಡುವುದುಂಟು. ಈ ಲೆಕ್ಚರರ್ ಕನ್ನಡದಲ್ಲಿ ಒಂದೂ ವರ್ಡ್ ಹೇಳೋದಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು. ಕನ್ನಡ ವಿದ್ಯಾರ್ಥಿಗಳೇ ಭಯಬೇಡ ಆರಂಭಿಕ ಶಿಕ್ಷಣದಲ್ಲಿ ಮೊದಲ ಮತ್ತು ಎರಡನೇಯ… Read More »

ಕೊರೋನಾ ಹೋಯ್ತು, ಮಾಸ್ಕಿನ ಹಂಗು ನನಗ್ಯಾಕೆ ಅಂತಿದ್ದೀರಾ? ರಿಯಲ್ ಟೆಸ್ಟ್ ಈಗ ಶುರು

ನನಗೆ ಕೊರೋನಾ ಬಂದು ಹೋಯ್ತು. ಒಂದೇ ವಾರದಲ್ಲಿ ಮನೆಯಲ್ಲೇ ಇದ್ದು ಗುಣಮುಖನಾದೆ. ಮತ್ತೊಮ್ಮೆ ಪರೀಕ್ಷೆ ಮಾಡಿದಾಗಲೂ ನೆಗೆಟಿವ್ ವರದಿ ಬಂದಿದೆ. ಈಗ ಸರ್ಕಾರವೇ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಿದೆ. ಲಾಕ್ ಡೌನ್ ಮುಗಿದಿದೆ. ಇನ್ನೇನು ಭಯವಿಲ್ಲ. ಆರಾಮವಾಗಿ ಮೊದಲಿನಂತೆ ಪೇಟೆ ಸುತ್ತುವೆ, ನೆಂಟರಿಷ್ಟರ ಮನೆಗೆ ಹೋಗಲು ಅಡ್ಡಿಯಿಲ್ಲ. ಮೂರು ತಿಂಗಳಂತೂ ನನಗೆ ಮತ್ತೆ ಕೊರೋನಾ ಬರುವ ಛಾನ್ಸೇ ಇಲ್ಲ. ಮಾಸ್ಕ್ ನ ಹಂಗು ನನಗೆ ಇನ್ನು ಬೇಡ. ಇಂಥಾ ಮನೋಭಾವ ಹಲವರಲ್ಲಿರುತ್ತದೆ. ಆದರೆ ನಿಜವಾದ ಪರೀಕ್ಷೆ ಶುರುವಾಗೋದೇ ಈಗ. ಕೊರೋನಾ ಬಂದು… Read More »

ಪ್ರತಿಭಾವಂತ ಕಲಾವಿದರನ್ನು ಹೇಗೆ ಬೆಳೆಸಬೇಕು? ನಟ ಅನಿರುದ್ಧ್ ಹೇಳ್ತಾರೆ ನೋಡಿ

ಪ್ರತಿಭೆಯಿದ್ದವರಿಗೆಲ್ಲಾ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗಲ್ಲ. ಇದಕ್ಕೆ ಅದೃಷ್ಟವೂ ಬೇಕಾಗುತ್ತದೆ. ಪ್ರತಿಭೆ, ರೂಪ ಇದ್ದರೂ ಅವಕಾಶ ಸಿಗದೇ ಎಷ್ಟೋ ಕಲಾವಿದರು ಅವಕಾಶ ವಂಚಿತರಾಗಿ ಎಷ್ಟೋ ದಿನ ಖಾಲಿ ಕೈಯಲ್ಲಿ ಕೂತಿದ್ದೂ ಇದೆ. ಇಂತಹವರ ಸಾಲಿಗೆ ಹಲವು ನಟರ ಹೆಸರನ್ನು ಹೇಳಬಹುದು. ಆ ಪೈಕಿ ಇತ್ತೀಚೆಗೆ ಅಕಾಲಿಕವಾಗಿ ಅಪಘಾತದಲ್ಲಿ ನಿಧನರಾದ ಸಂಚಾರಿ ವಿಜಯ್ ಕೂಡಾ ಒಬ್ಬರು. ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದರೂ, ಅಭಿನಯಕ್ಕೆ ಪ್ರಾಶಸ್ತ್ಯವಿರುವ ಸಿನಿಮಾಗಳಲ್ಲಿ ಅಭಿನಯಿಸಿ ತಾವೊಬ್ಬ ಉತ್ತಮ ನಟ ಎಂದು ಸಾಬೀತುಪಡಿಸಿದ್ದರೂ ಅವರಿಗೆ ಅದಕ್ಕೆ ತಕ್ಕ ಅವಕಾಶ ಸಿಕ್ಕಿರಲಿಲ್ಲ. ಈ ಬಗ್ಗೆ ಅವರೇ… Read More »

ಕೊರೋನಾಗೆ ವ್ಯಾಕ್ಸಿನ್ ಯಾಕೆ ಹಾಕಿಸಿಕೊಳ್ಳಬೇಕು?

ಇತ್ತೀಚೆಗೆ ಪರಿಚಿತರೊಬ್ಬರು ವ್ಯಾಕ್ಸಿನ್ ಹಾಕಿಸಿಕೊಂಡರೂ ಕೊರೋನಾ ಬರುತ್ತದಂತೆ. ಇದರಿಂದ ದೊಡ್ಡ ಪ್ರಯೋಜನವೇನೂ ಇಲ್ಲ ಬಿಡಿ ಎಂದು ಉಡಾಫೆಯಿಂದ ಹೇಳಿದರು. ಕೊರೋನಾಗೆ ವ್ಯಾಕ್ಸಿನ್ ಬಂದಾಗ ಆರಂಭದಲ್ಲಿ ಹೆಚ್ಚಿನವರಿಗೆ ಈ ವ್ಯಾಕ್ಸಿನ್ ಬಗ್ಗೆ ಅನುಮಾನಗಳಿದ್ದವು. ಇದರ ವಾಯಿದೆ ಕೇವಲ ಒಂದು ವರ್ಷವಂತೆ. ಪದೇ ಪದೇ ಹಾಕಿಸಿಕೊಳ್ಳಬೇಕಂತೆ. ಹಾಕಿಸಿಕೊಂಡವರಿಗೆ ಅಡ್ಡ ಪರಿಣಾಮಗಳಾಗುತ್ತದಂತೆ. ಹೊಸ ಲಸಿಕೆ, ಏನಾದರೂ ಹೆಚ್ಚು ಕಡಿಮೆಯಾದರೆ? ಇತ್ಯಾದಿ.. ಇದರಿಂದಾಗಿ ಎಷ್ಟೋ ಜನ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಈಗಲೂ ವ್ಯಾಕ್ಸಿನ್ ಬಗ್ಗೆ ಉದಾಸೀನ ಮಾಡುವವರು, ಉಡಾಫೆ ಮಾಡುವವರು ಇದ್ದೇ ಇದ್ದಾರೆ ಬಿಡಿ. ಆದರೆ… Read More »

ಅನಪೇಕ್ಷಿತ ಅತಿಥಿಯೊಂದು ಮನೆಗೆ ಬಂದಾಗ

ನಾನೂ ಕೋವಿಡನಾದೆ.. ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕೆಂದು ದೊಡ್ಡವರು ಹೇಳುತ್ತಾರೆ. ಹಾಗೆಯೇ ಟೈಫಾಯ್ಡ್, ಡೆಂಗ್ಯೂ ಅಂತ ಥರಹೇವಾರಿ ಜ್ವರಗಳ ಬಳಿಕ ಕೊರೋನಾ ಏನು ಕಮ್ಮಿ ಅಂತ ಅದೂ ಅನಪೇಕ್ಷಿತ ಅತಿಥಿಯಂತೆ ಮನೆಗೆ ಬಂತು. ಕಳೆದೊಂದು ವರ್ಷದಿಂದ ಕೈಗೊಳ್ಳದ ಎಚ್ಚರಿಕೆಯಿಲ್ಲ. ಡೆಟಾಲ್ ಹಾಕಿ ಉಜ್ಜಿದ್ದೇ ಉಜ್ಜಿದ್ದು, ಉಪ್ಪು ನೀರಿನಲ್ಲಿ ತೊಳೆದಿದ್ದೇ ತೊಳೆದಿದ್ದು ಹೀಗೆ ಏನೇನೋ.. ನಮ್ಮ ಮನೆಗೆ ಕೊರೋನಾ ಹೇಗೆ ಬರುತ್ತದೆ ನಾನೂ ನೋಡೇ ಬಿಡುತ್ತೇನೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡಿದ್ದೇ ಬಂತು. ಮನೆಯೊಳಗೆ ಪ್ರವೇಶಿಸಿದ್ದೇ ತಡ, ಮನೆಯ ವಾತಾವರಣವೇ ಬದಲಾಯಿತು. ಒಟ್ಟಿಗಿದ್ದವರದ್ದು… Read More »